Submission 527

“ತುಟ್ಟಿ ಮಾತು”

ರಚನೆ : ಸುಕೃತ ಪಟ್ಟಣಶೆಟ್ಟಿ

----------------------------------

ಸುಮ್ಮನಿರುತ್ತಾಳೆ, ಏನನ್ನೂ ಹೇಳಲಾರದೆ ಗುಟ್ಟಾಗಿರುತ್ತಾಳೆ, ಯಾರನ್ನೂ ಕೇಳದೇ ಬಲು ಘಾಟಿ, ಆಕೆಯ ಮಾತು ಭಾಳ ತುಟ್ಟಿ! ಸದಾ ನಗುತ್ತಿದ್ದವಳು ಕಲ್ಲಿಗೂ ಮಾತು ಕಲಿಸಿದವಳು ಈಗ ಹೀಗಾಗಿದ್ದಾಳೆ! ಕಾರಣ, ನೀವು ಆಕೆಯನ್ನು ಕೇಳಲಿಲ್ಲ, ಆಕೆಗೆ ಬರಿ ಕೆಲಸ ಹೇಳಿದಿರಲ್ಲ ಮರು ಮಾತನಾಡದ ಆಕೆಯ ಮಾತು ತುಟ್ಟಿ ಎಂದಿರಲ್ಲ. ನೀವು ಆಕೆಯನ್ನು ಮನ ಮನೆಯ ಹೊರಗಿಟ್ಟಿರಿ ಆಕೆಯನ್ನು ಗುಟ್ಟು ಎಂದಿರಿ. ನೆನಪಿರಲಿ ಮನೆಯ ಸೊಸೆಯಾಕೆ ಕೆಲಸದಾಕೆ ಅಲ್ಲ. ಮಾತು ತುಟ್ಟಿ, ಆ ಮಾತಿಗೆ ಬೆಲೆಯಿದೆ ಮೌನಕ್ಕೆ ಅರ್ಥ ಇದೆ.

----------------------------------

ನೋಂದಣಿ ಐಡಿ : KPF-S1-5099

0
Votes
149
Views
1 Year
Since posted

Finished since 437 days, 19 hours and 24 minutes.

Scroll to Top