Submission 840

ಆಕೆ ಚಾರಿಣಿಯೇ ?

ರಚನೆ : ಉದಯಕುಮಾರ

----------------------------------

ಆಕೆ ಕಾಮಯೋಗಿನಿ, ತೃಪ್ತಿಗಾಗಿ ಸಂಭೋಗಿಸಿದವಳಲ್ಲ, ಹಸಿವಿಗಾಗಿ ಸೀರೆಯಾಸಿದವಳು.. ಆಕೆ ಚಂದ ಕಾಣಲು ಸಿಂಗರಿಸಿ ಕೊಂಡವಳಲ್ಲ, ಮಾಸುತ್ತಿರುವ ಬದುಕ ಕಳೆಗಟ್ಟಿಸಲು ಕೂತವಳು.. ಆಕೆಯ ಕಣ್ಣಲ್ಲಿ ಕಾಣುವುದು ಶೃಂಗಾರವಲ್ಲ, ಕಾಮವೂ ಅಲ್ಲ, ದೇವರ ಮುಡಿಗೇರಬೇಕಾದ ಹೂವು ದಾರಿಹೋಕರಿಗೆ ಸಿಕ್ಕಂತೆ ಮಾಡಿದುದರ ಕಿಚ್ಚದು.. ಪ್ರತಿ ಬಾರಿ ಸೀರೆ ಜಾರಿದಾಗ ಜಾರಿದುದು ಸೆರಗಲ್ಲ, ಅಲ್ಲಿಗೆ ತಂದು ಕೂರಿಸಿದ ಆಕೆಯ ಬದುಕಿನ ಭಾವುಕತೆಯದು .

----------------------------------

ನೋಂದಣಿ ಐಡಿ : KPF-S1-5383

0
Votes
155
Views
1 Year
Since posted

Finished since 502 days, 1 hours and 22 minutes.

Scroll to Top