Submission 838

ನನ್ನವಳು

ರಚನೆ : ರಾಜೇಶ್ ಎಂ.ಆರ್

----------------------------------

ಈ ಪುಟ್ಟ ಎದೆಯಲ್ಲಿ ಒಂದು ಬಯಕೆಯನ್ನಿಟ್ಟಳು ಆ ಬಯಕೆಯ ನೀಗಿಸೋ ಕ್ಷಣದಲ್ಲಿ ಆಕೆ ನಿಶಬ್ದಳಾದಳು ಮೋಹಿನಿಯಾಗಿ ನನ್ನ ಕನಸಲ್ಲಿ ಕಾಡಿದಳು ನೋಡಲೆಂದು ನಾನೆದ್ದಾಗ ಆಕೆ ಕಣ್ಮರೆಯಾಗಿದ್ದಳು ಅವಳ ಆ ಅಂದಕ್ಕೆ ಶರಣಾಗುವಂತೆ ಮಾಡಿದಳು ಶರಣಾದ ಮೇಲೆ ಮುಕ್ತಿಯ ನೀಡದಂತೆ ಮಾಯವಾದಳು ಊಹೆಯಲ್ಲೇ ಕಳೆಯುತ್ತಿರುವೆ ಅದೆಷ್ಟೋ ರಾತ್ರಿಗಳು ಆ ಎಲ್ಲಾ ಊಹೆಗೂ ಮೀರುವಂತೆ ನನ್ನ ಆಟವಾಡಿಸುತ್ತಿರುವಳು ನನ್ನೆಲ್ಲ ಪ್ರಶ್ನೆಗೆ ಪ್ರಶ್ನಾರ್ಥಕ ಚಿನ್ಹೆಯಾದಳು ಉತ್ತರಿಸಲು ಆಕೆ ಯಾವಾಗ ಬರುವಳು ನನ್ನ ಈ ತಳಮಳಕ್ಕೆ ಸಮಾಧಾನ ಯಾವಾಗ ಹೇಳುವಳು ಈ ಬಡಪಾಯಿ ಜೀವಕ್ಕೆ ಯಾವಾಗ ಶಾಂತಿ ನೀಡುವಳು

----------------------------------

ನೋಂದಣಿ ಐಡಿ : KPF-S1-5381

0
Votes
117
Views
1 Year
Since posted

Finished since 315 days, 18 hours and 48 minutes.

Scroll to Top