ನಾನು ಜಾತಕ ಪಕ್ಷಿ
ರಚನೆ : ಶಶಿಧರ ಸುರೇಶ ಸುಣಗಾರ
----------------------------------
ಗಾಜಿನ ಮರೆಯಲಿ ನೋಡಿದೆ ನಿನ್ನಯ.. ಮೂಡಿದೆ ಮನದಲಿ ನಿನ್ನಯ ಪರಿಚಯ.. ಹಾಡಿದೆ ಎನ್ನೆದೆ ಬಿಂಬವ ನೋಡುತ.. ಕಟ್ಟಿದೆ ಕನಸು ಉಸಿರನು ಮೆಲ್ಲುತ.. ಸುರಿದಿದೆ ಮುಂಗಾರು ಧರೆಯನು ತಣಿಸುತ.. ತಣಿದಿದೆ ಮನವು ನಿನ್ನನೇ ನೆನೆಯುತ.. ಚಿಮ್ಮಿದೆ ಮಿಂಚು ಬಾನಿನ ಅಂಚಲಿ.. ನಲಿದಿದೆ ನವಿಲು ಕಣ್ಣಿನ ಅಂಚಲಿ.. ತೋರಿದೆ ನೀನು ನೀಲಾಕಾಶವ.. ತೊಡಿಸಿದೆ ನಾನು ಮುತ್ತಿನ ಹಾರವ.. ಸೇರಿದೆ ಹಕ್ಕಿ ಗೂಡಿನ ಮರೆಯಲಿ.. ಸೇರಿದೆ ನೀನು ನನ್ನ ಮನದಲಿ.. ದಿನವೂ ನಿನ್ನನೇ ಕಾಣುವ ಹಂಬಲ.. ಅದಕೆ ಸಿಗುವುದೆ ನಿನ್ನಯ ಬೆಂಬಲ..?
----------------------------------
ನೋಂದಣಿ ಐಡಿ : KPF-S1-5367