Submission 806

ಯುಗಳಗೀತೆ

ರಚನೆ : ಶ್ರೀ. ಎಫ್.ಎಂ.ಹಾದಿಮನಿ(ಗೌಡ್ರುಸರ್ಕಾರ್)

----------------------------------

ಬರೆದು ಬಿಡು ನಲ್ಲೆ ಮಹಾನ್ ಕವಿತೆಗಳೆನೆಲ್ಲ, ಬಾಯ್ಮೇಲೆ ಬೆರಳಿಟ್ಟು ಹಪಹಪಿಸುತ್ತಿದ್ದೇನೆ ಹನಿ ನೀರಿಗಾಗಿ ಕಾದ ಗುಬ್ಬಚ್ಚಿಯಂತೆ ನಿನ್ನೊಲವ ಒರತೆಗಾಗಿ ಕಾದಿದ್ದೇನೆ ಎದೆಯೊಳಗನ ಮರುಭೂಮಿಯಲ್ಲಿ ರಣ ರಣ ಸೂರ್ಯನ ಶಾಖಕ್ಕೆ ಎದೆಯೊಡ್ಡಿ ನಿನಗೆ ಬೆನ್ನು ನೀಡಿ ಪ್ರೇಮಕವಿತೆಯ ನಿನ್ನಿಂದ ಬರೆಸಲು ಕಾದಿದ್ದೇನೆ, ಒಮ್ಮೆ ಇಳಿಸಿಬಿಡು ಪದಗಳ ಸರಮಾಲೆ, ಚೆಲುವಿನ ಚಿತ್ತಾರದಂತೆ ಯುಗದ ಜಗದ ರಗಳೆಯ ಬದಿಸರಿಸಿ ಬೆನ್ನ ಮೇಲೆ, ಎದೆಗಿಳಿಯಲಿ ಹೊನ್ನ ಚರಿತೆ ಒಲವ ನೀಡಿದ ಯುಗಳಗೀತೆ

----------------------------------

ನೋಂದಣಿ ಐಡಿ : KPF-S1-5366

0
Votes
164
Views
1 Year
Since posted

Finished since 507 days, 8 hours and 34 minutes.

Scroll to Top