ಅಕ್ಕರೆಯ ಅಕ್ಕರ
ರಚನೆ : ಶಿವಶರಣ ದಾನಪ್ಪ ಉಜ್ಜಿನಿ
----------------------------------
ಎಂಥ ಸುಂದರ ಪದವದು! ಲೋಕ ಸೃಷ್ಟಿಯ ಸಕಲ ಜೀವಕೆ, 'ಚೈತನ್ಯ' ನೀಡುವ ಎರಡಕ್ಷರದ ಪದವದು/ಪ / ಹೃದಯದಾಳದಿಂದ.. ಭರವಸೆ - ಪ್ರೀತಿಯ ಚಿಮ್ಮುವ, ಅಂತಕರಣದ ಚಿಲುಮೆಯದು./1/ ಅಶಕ್ತಿಗೆ ; ಶಕ್ತಿಯಾಗಿ, ದುಃಖಕೆ ಸಾಂತ್ವನನೀಡಿ ಹಿಂಜರಿಕೆಯ ಮೆಟ್ಟಿನಿಂತು ಮುನ್ನುಗ್ಗುವ ""ಛಲ"" ತುಂಬುವ ದ್ವಿವರ್ಣವದು./2/ ಪ್ರೀತಿ - ಕರುಣೆ ಸಹನೆ - ಕ್ಷಮಾ ಗುಣಗಳ ಕಣಜವದು, ಅಕ್ಕರೆಯ ಅಕ್ಕರವದು. /3/ ನಿಸರ್ಗದ ಶುದ್ಧ ಆತ್ಮವದು.ನಿರಂತರ ಪೋಷಿಸಿ ರಕ್ಷಿಸುವ, ನೋವಾದರೆ ""ಅವ್ವ"" ಅಂದು ನರಳಿಸುವ ಎರಡಕ್ಷರದಪದವದು/4/
----------------------------------
ನೋಂದಣಿ ಐಡಿ : KPF-S1-5325