ಮರಗಳೆ ನಮ್ಮ ಮಕ್ಕಳು
ರಚನೆ : ಕಲ್ಲಪ್ಪ ಪರಸಪ್ಪ ಡೋಣಿ
----------------------------------
ಜಗವಿದು ವಿಶಾಲದಾಲದ ಮರ ವಿಶಾಲವಾಗಲಿ ಅಮರ ಆಮರ ಮನೆಗ್ಹತ್ತು ಮರವಿರಲಿ ಜಗ ನಕ್ಕು ನಲಿತಿರಲಿ ಮನುಜನ ನೆಲೆ ಅಶಾಶ್ವತ ತವರ ಮರಕ್ಕಿಲ್ಲ ಮರಣ ಅದೆಂದೂ ಅಮರ||೧|| ಮನುಜ ಮಾಡುತಿಹನು ಮರಗಳ ಹರಣ ಹೆಚ್ಚುತಿದೊ ಬಿಸಿಲಿನ ಧಗೆಯ ರಣರಣ ತಿಳಿದೂ ಮಾಡುತಿಹನು ಕಾಲಹರಣ ಜಾರುತಿದೊ ಭುವಿಯ ನಿಯಂತ್ರಣ|||೨|| ಮರಕ್ಕಿಲ್ಲ್ಯಾವ ಬೇಧ—ಭಾವ ಮಕ್ಕಳಂತೆ ಬೆಳೆಸೋಣನಾವು ಮರಗಳೆ ನಮ್ಮ ಮಕ್ಕಳು ನಮ್ಮೀ ದೇಹದ ಹೊಕ್ಕಳು||೩||
----------------------------------
ನೋಂದಣಿ ಐಡಿ : KPF-S1-5469