ಅರಿವಿಲ್ಲದೆ ಅಭ್ಯಾಸವಾದವಳು ನೀ..
ರಚನೆ : ಹೇಮಂತ ಕುಮಾರ ಎಸ್ ಎಚ್
----------------------------------
ಎದೆಯ ಕಡಲ ಕಡೆದು ನೋಡು ನಿನ್ನ ಕಡೆಗೆ ನನ್ನ ಜಾಡು, ಅಲೆ ಎಬ್ಬಿಸೊ ಬಿರುಗಾಳಿ ಬೀಸಿದೆ ಅನುರಾಗದ ಸಿಹಿಗಾಳಿ, ಬಾನಿನ ಜಗುಲಿಯು ಕಾದಿವುದು ಅಲ್ಲಿ ಕಳೆಯಲು ಈ ಕ್ಷಣವ ಪಿಸುಮಾತಿನಲ್ಲಿ, ಮುಂಗುರುಳ ನೀ ಸರಿಸಿ ಬೀರಿದರೆ ನಗೆ ಹನಿಯ ಅರಳುವುದು ನನ್ನೆದೆಯ ಚೆಲಿಯ, ನೀ.. ಹೇಳೇ ನನ ನಲ್ಲೆ ನಾನೀಗ ನಿನ್ನಲ್ಲಿ, ನೀ ಸೇರು ನನ್ನ ತೊಳಲ್ಲಿ..
----------------------------------
ನೋಂದಣಿ ಐಡಿ : KPF-S1-5446