ಮುಖಾರವಿಂದ
ರಚನೆ : ರವಿ ಭಟ್ಟ
----------------------------------
ನಗುವಿನಲ್ಲಿ ನವಿಲ ಗತ್ತು.. ದಂತಪಂಕ್ತಿ ಹೊಳೆವ ಮುತ್ತು.. ಕಪ್ಪು ನೀಳ ಕೇಶರಾಶಿ.. ಬಿಳಿ ಗುಳಿಕೆನ್ನೆ ಮೃದುವಿನ ಕಾಶಿ.. ಕಿವಿಗೆರಡು ಜೋಲುವ ಓಲೆ.. ತಲೆಯಲ್ಲಿ ಹಾರುವ ಮಲ್ಲಿಗೆಯ ಮಾಲೆ.. ಕಣ್-ರೆಪ್ಪೆಯಂಚಿನ ಕಣ್ಸೆಳೆಯುವ ಕಾಡಿಗೆ.. ಗಲ್ಲದ ತುದಿಯಲ್ಲಿನ ನಾಚಿಕೆ.. ನೆತ್ತಿಗೊಂದು ಚೂಡಾಮಣಿ ಕಟ್ಟು.. ಜೋಡಿಹುಬ್ಬುಗಳ ನಡುವೆ ಕುಂಕುಮದ ತೊಟ್ಟು.. ಮೂಗಿಗೊಂದು ಬೊಟ್ಟು.. ಇದೇ ಅವಳ ಸೌಂದರ್ಯದ ಗುಟ್ಟು..... ಪಳಪಳ ಹೊಳೆಯುವ ಪಿಳಿಪಿಳಿ ನಯನ.. ಅದ ನೋಡಿ ಬರೆದೆ ಸಾಲು-ಸಾಲು ಕವನ...!
----------------------------------
ನೋಂದಣಿ ಐಡಿ : KPF-S1-5415