Submission 874

ಇರುವಲ್ಲಿಯೇ ಇರುವೆನು

ರಚನೆ : ರವಿ ವೈ ಬಡಿಗೇರ್

----------------------------------

ಇರುವಲ್ಲಿಯೇ ಇರುವೆನು ಸಮಯ ಕಳೆದರೂ ಜಗ ಬದಲಾದರೂ ಹಾಗೆಯೆ ಇರುವೆ ಆಸೆಗಳು ನಗುತ ದೂರ ದೂರಸಾಗಿವೆ ದಿನಗಳೆದಂತೆ ಒಬ್ಬಂಟಿಯಾಗಿರುವೆ। ಬದಲಾವಣೆಗೆ ಕಾದು ಬಾಯಾರಿಕೆಗೂ ಹನಿ ನೀರ ಸಾಲ ಕೇಳುವಂತಾಗಿದೆ, ಬರಡು ಭೂಮಿಯಲ್ಲಿ ಬಬೆಳೆಬೆಳೆದು ಮಳೆಗಾಗಿ ಕಾಯುವಂತೆ॥ ಕಾಲಚಕ್ರ ಉರುಳುವಾಗ ಹೇಳುವವರಿದ್ದರೂ ಕೇಳಿಸಿಕೊಳ್ಳುವ ಸಹನೆ ಇರಲಿಲ್ಲ ಕೈಗೆಟುಕುವುದನ್ನು ಪಡೆಯಲಿಲ್ಲ ಈಗ ಮತ್ತೆ ಮತ್ತೆ ನೆನಪಾಗಿ ಒದ್ದು ಹೇಳುತಿವೆ ಬುದ್ದಿಮಾತನು। ಮೊದಲಿರುವಲ್ಲಿಗೆ ಮರಳಿ ಬಂದು ಹಿಂದಿನ ಪುಟಗಳನ್ನು ತಿರುವಿದರೆ ಎಲ್ಲವೂ ಖಾಲಿ ಜೀವನದ ಹೊಸ ಪುಟ ತೆರೆಯಹೊರಟರೆ ಉಳಿದಿರುವುದು ಎಣಿಕೆಗೆ ಸಿಗುವಷ್ಟು ಮಾತ್ರ॥ ಖಾಲಿ ಕೈಯ ಪಕೀರನನ್ನು ನೋಡಿ ಆಡಿಕೊಳ್ಳುವವರೊಂದು ಕಡೆ, ಮನದೊಳಗೆ ನಕ್ಕು ಖುಷಿಪಡುವವರು ಇನ್ನೊಂದು ಕಡೆ ನನಗಾಗಿ ಇರುವುದು ದೂರವಾಗಿದೆ ಆದರೂ ಹುಡುಕುತ್ತಿರುವೆ ಹೊಸತೊಂದನು। ಸುತ್ತಲಿನ ಪರಪಂಚ ಬದಲಾಗಿದೆ, ಆದರೆ ನಾನು? ಇರುವಲ್ಲಿಯೇ ಇರುವೆನು ಮುನ್ನಡೆಯಬೇಕಾಗಿದೆ ಬದಲಾಗುವುದರೊಂದಿಗೆ ಹೊಂದಿಕೊಂಡು ಹೊಸತೊಂದು ಬದುಕಿನ ದಾರಿ ಕಂಡುಕೊಳ್ಳಲು ಹಾಗೂ ಇರುವಲ್ಲಿಂದ ಮುಂದೆ ಹೋಗಲು॥

----------------------------------

ನೋಂದಣಿ ಐಡಿ : KPF-S1-5402

0
Votes
129
Views
1 Year
Since posted

Finished since 317 days, 19 hours and 5 minutes.

Scroll to Top