Submission 870

ಕತ್ತಲು ಕಾಶಿ

ರಚನೆ : ಲೇಖನ್ ಎಂ

----------------------------------

ಕತ್ತಲೆಂಬ ಕಾಶಿಯಲ್ಲಿ ಬೆಳಗಿನ ಹೆಣಗಳೆಲ್ಲ ಸುಡುತಿಹುದು ಬೆಳದಿಂಗಳಿನ ಗಂಗೆ ತೊಳೆತೊಳೆದು ದೂಡುತಿರಲು ಆತ್ಮ ದೇಹಕ್ಕೆ ಪಿಂಡ ಬಿಡುತಿಹುದು ವಿಚಾರ ಮಂತ್ರಗಳು ವಿಮರ್ಶೆ ಗಂಟೆಗಳು ಕಟ್ಟಿಗೆ ಒಳಗಿನ ಹೊಗೆಯನೆಲ್ಲ ಕಾಯದೊಳಗಿನ ಬಗೆಯನೆಲ್ಲ ಭೇದಿಸಿ ಛೇದಿಸುತಿಹುದು ಮೋಕ್ಷಧಾರಣೆಗೆ ವಿಶ್ವನಾಥನೇಳುವಲ್ಲಿಗೆ ಬೆಳಕೆಂಬ ನರಕದಲ್ಲಿ ಮೂಕ ಗೂಗೆ ಕೂಗುತಿಹುದು ಸುಟ್ಟ ಹೆಣವು ಬಟ್ಟೆ ತೊಟ್ಟು ಎದ್ದು ಹೋಗುತಿಹುದು

----------------------------------

ನೋಂದಣಿ ಐಡಿ : KPF-S1-5400

0
Votes
185
Views
1 Year
Since posted

Finished since 497 days, 17 hours and 19 minutes.

Scroll to Top