Submission 852

ಜೀವನ-ಗಾಯನ

ರಚನೆ : ಅವಿನಾಶ. ವಿ. ಹಿರೇಮಠ

----------------------------------

ಜೀವನ ಒಂದು ಸುಂದರ ಸಂಗೀತ, ಅದರ ಸಂಯೋಜನೆ ಎಂಥ ಅದ್ಭುತ..! ನಿನ್ನ ನಡೆ ಸುಲಲಿತ ಸಾಹಿತ್ಯವಾದರೇ, ನಿನ್ನ ನುಡಿಯೇ ಇಂಪಾದ ಸ್ವರವಂತೆ. ಉಡುಗೆ ತೊಡುಗೆ ತಾಳವಾದರೇ, ಆಚಾರ ವಿಚಾರ ನಾದವಂತೆ. ಗೆಳೆಯ ಬಳಗದವರು ವಾದಕರಾದರೇ, ಬಂಧು ಬಳಗದವರು ವರ್ಧಕರಂತೆ. ದುಡಿಮೆ ‌ಸುಮಧುರ ಕಂಠವಾದರೇ, ಹಿರಿಮೆ ಮಧುರ‌ ಆಲಾಪವಂತೆ. ನಿನ್ನ ಗುಣ-ಗಾನದ ಗಾಯಕ, ಬಹಿರಂಗದ ಪರ ಗಾಯಕನಾದರೇ.. ಅದರ ಸಾಹಿತ್ಯ-ಸ್ವರ ಸಂಯೋಜಕ, ನಿನ್ನ ಅಂತರಾಳದ ಸಹ ನಿರ್ದೇಶಕನದ್ದಲ್ಲವೇ..??

----------------------------------

ನೋಂದಣಿ ಐಡಿ : KPF-S1-5389

0
Votes
162
Views
1 Year
Since posted

Finished since 501 days, 19 hours and 9 minutes.

Scroll to Top