ಆಗಮನ ಮತ್ತು ನಿರ್ಗಮನ
ರಚನೆ : ಮತ್ತೆ. ಚಂದ್ರಶೇಖರಚಾರಿ
----------------------------------
ರವಿ ಮೂಡುವ ವೇಳೆ ಚಂದಿರನು ಸರಿದಿಹೆನು ಚಿಲಿಪಿಲಿ ಹಕ್ಕಿಗಳ ಧ್ವನಿ ಯಾಕೆ ಹೇಳಿ ಬೆಳಕ್ಕಿನ ಚಿತ್ತಾರದ ರಂಗೋಲಿ ನ ನೋಡಿ ||೧|| ಮೂಡಿರುವನು ಮೂಡಣ ದಿಕ್ಕಿನಲ್ಲಿ ಚೆಲ್ಲಿರವನು ಬೆಳಕಿನ ಕಾಂತಿಯನ್ನು ಅಲ್ಲಿ ಇವನು ಇದ್ದೊಡೆ ಜೀವನವು ಇಲ್ಲಿ ಸಕಲ ಜೀವರಾಶಿಗಳು ಇವನ ನೆಲೆಯಲ್ಲಿ ||೨|| ಬಾನಿನ ಅಂಗಳದಲ್ಲಿ ತೇಲುತ್ತಿರುವನ್ನು ರವಿಮಾಮ ಅಮ್ಮನ ಕರೆಗೆ ಬಂದಿರುವನು ಚಂದ್ರ ಮಾಮ ಪುಟಾಣಿ ಮಕ್ಕಳ ಮುದ್ದಿನ ಮಾಮ ನಕ್ಷತ್ರಗಳ ಪುಂಜಗಳಿಗೆ ಇವನೇ ಯಜಮಾನ ||೩||
----------------------------------
ನೋಂದಣಿ ಐಡಿ : KPF-S1-5338