Submission 635

ಅಕ್ಷರ

ರಚನೆ : ಸಿದ್ಧನಗೌಡ ಹಾದಿಮನಿ

----------------------------------

ಧರಣಿಯೊಳಗಡಗಿದೆ ಚಿರಬೆಲೆಯನೀವ ಹಳದಿ ವರ್ಣದ ಬಂಗಾರ.. ಆಕಾಶವನೇರಿ ಕೂತಿವೆ ಚಿರಬೆಳಕನೀವ ತಾರಾ ಮಂಡಲದ ಸಂಸಾರ... ಅವನಿಯನಾವರಿಸಿವೆ ಚಿರಬದುಕನೀವ ಅಕ್ಷರಗಳೆಂಬ ಅಮೃತಸಾರ....!೧! ರವಿಯೊಳಗಡಗಿದೆ ಅಗ್ನಿಯನೀವ ತಾಪ ಜ್ವಾಲೆಯ ಬೆಂಕಿಯುಂಗುರ.. ಶಶಿಯೊಳಡಗಿದೆ ತಂಬೆಲರನೀವ ತಂಪು ತಂಗಾಳಿಯ ಮಧುರ ಸಾರ.. ಮೂಜಗವನಾವರಿಸಿವೆ ಚಿರಶಾಂತಿಯನೀವ ಅಕ್ಷರಗಳೆಂಬ ಸಂಜೀವಿನಿ ಶಿಖರ..!೨! ಬಾನು ಭೂಮಿಗಿಂತಲೂ ಮನೋಹರ ಸೂರ್ಯ ಚಂದ್ರರಿಗಿಂತಲೂ ನಿಖರ.. ಈ ಅಕ್ಷರಗಳೆಂಬ ದಿವ್ಯಮಂತ್ರಸಾರ.... ಈ ಅಕ್ಷರಗಳೆಂಬ ಬದುಕ ಬೆಳಗುವ ದೇವನವತಾರ...!೩!

----------------------------------

ನೋಂದಣಿ ಐಡಿ : KPF-S1-5236

0
Votes
141
Views
1 Year
Since posted

Finished since 437 days, 19 hours and 31 minutes.

Scroll to Top