Submission 633

ದಣಿದ ಮನ

ರಚನೆ : ವಿಕಾಸ ಶಿರಿಗಣ್ಣವರ

----------------------------------

ತೀರ ತಿಳಿಯದೆ ಸಾಗಿದ ದಾರಿಯಲ್ಲಿ ತೀರಿ ಹೋದ ಆಸೆಗಳ ಹೊತ್ತು ನಡೆದ ಮನಕೆ ದಣಿವಾಗಿದೆ ಬೆಳಕೆ ಇಲ್ಲದ ಹಾದಿಯಲ್ಲಿ ಬಳಕೆ ಆಗದ ದೀಪಗಳ ಹೊತ್ತಿಸದೆ ತನ್ನ ತಾ ಅರಿಯದೆ ಕತ್ತಲೆಯಲ್ಲಿ ಬೆಳಕಿನ ಕನಸ ಕಂಡ ಮನಕೆ ದಣಿವಾಗಿದೆ ಬಣ್ಣದ ಬದುಕಲ್ಲಿ ಬೇಡದ ಬಣ್ಣಗಳ ಬಳಿದು ಕಳೆದು ಹೋದ ಕಾಲಕ್ಕೆ ಕೊರಗುತ ಕುಳಿತ ಮನಕೆ ದಣಿವಾಗಿದೆ ತೀರಿ ಹೋದ ಆಸೆ, ಬೆಳಕೆ ಕಾಣದ ಕನಸು, ಮರಳಿ ಬಾರದ ಕಾಲವ ಬಯಸುತ್ತಾ ಕುಳಿತ ಮನಕೆ ದಣಿವು ಆಗದೆ ಇರುವುದೆ...

----------------------------------

ನೋಂದಣಿ ಐಡಿ : KPF-S1-5234

0
Votes
138
Views
1 Year
Since posted

Finished since 435 days, 22 hours and 33 minutes.

Scroll to Top