ಮರ
ರಚನೆ : ಸಾಯಿಪ್ರಸಾದ್ ಆರ್
----------------------------------
ಆ ಮರವು ಉರುಳಿಹುದು, ಆ ಮರ, ಅಮರವಾಗಿಹುದು, ಅದರೆಲೆಗಳ ನೆರಳಿನಲ್ಲಿ, ವಿಶ್ರಮಿಸಿದವರಿಂದಿಲ್ಲ, ಉಳಿದವರು ಶ್ರಮಜೀವಿ, ವಿಶ್ರಾಂತಿ ಬೇಕಿಲ್ಲ, ತಾನಿತ್ತ ಉಸಿರುಂಡು, ಉಸಿರ ಸವಿದವರಿನ್ನಿಲ್ಲ, ಉಸಿರ ಅರಿವಿಲ್ಲದೆ, ಹೆಸರ ಹುಡುಕುವರೆಲ್ಲ, ಹಸಿರೆಲೆಗಳ ಜೊತೆಗೆ, ಹಣ್ಣು-ಹೂಗಳ ನೃತ್ಯ, ಕಾಣಲು ಸಾಗುವರೆಲ್ಲ, ದೂರದೂರಿನ ಸತ್ಯ, ನೂರಾರು ವರುಷಗಳಿಂದ, ಎತ್ತರಕೆ ಬೆಳೆದು, ಮೆರೆದು, ಮಳೆ, ಬಿಸಿಲು, ಗಾಳಿಯಲಿ, ಎದೆಗೆಡದೆ ನಿಂತು, ಬಸವಳಿದು, ಇಂದು ಉರುಳಿಹುದು, ಯಾರಿಗೂ ಬೇಡದೆ, ಯಾರನೂ ಕೂಗದೆ...
----------------------------------
ನೋಂದಣಿ ಐಡಿ : KPF-S1-5202