Submission 591

ವರ್ಷಧಾರೆ

ರಚನೆ : ಆನಂದ ಯಲ್ಲಪ್ಪ ಕೊಂಡಗುರಿ.ಹಿರೇಬಾಗೇವಾಡಿ

----------------------------------

ಕಾರ್ಮೋಡದ ಕತ್ತಲಲ್ಲಿ,ತಂಗಾಳಿಯ ಮುಸ್ಸಂಜೆಯಲ್ಲಿ. ಗುಡುಗು ಮಿಂಚುಗಳ ಆರ್ಭಟದಿ. ನವಿಲ ನರ್ತನದಿ ನೀ ಹುಟ್ಟುವೇ. ಇಳೆ ಕಾಯುತ್ತಿದೆ ನಿನ್ನ ಆತ್ಮೀಯ ಆಲಾಪಕೆ. ಮಣ್ಣಮಗನ ಭರವಸೆಯ ಕಣ್ಣು ಬಾನತ್ತ. ಸಿದ್ದಗೊಂಡಿಹುದು ಬಿತ್ತನೆಗೆಲ್ಲ. ನಿನ್ನ ಸ್ಪರ್ಶ ಒಂದೇ ಬಾಕಿ ಅಲ್ಲ. ಭೋರ್ಗರೆವೆಯಾ? ನೀ ಜಗದ ಕೊಳೆ ತೊಳೆಯಲೆಂದೆ. ಅಯ್ಯೋ ಸಾಕೆನ್ನುವಂತೆ ಅಪ್ಪಳಿಸುವೆ. ಜಲಪ್ರಳಯವನೇ ಸೃಷ್ಟಿ ಮಾಡುವ ನೀನು! ಕಾಡ್ಗಿಚ್ಚಿನಲ್ಲಿ ಸುಡುತ್ತಿರಲು ಕಾಡು ಎಲ್ಲಿರುವೆ ನೀನು? ಮಕ್ಕಳೆ ಮಾತು ಕೇಳದ ಕಾಲದಿ ನೀನೇನು ಮಾಡುವೆ ಹೇಳು? ಆಗಾಗ ಅತಿವೃಷ್ಟಿ ಅನಾವೃಷ್ಟಿಗಳ ಇನಾಮು

----------------------------------

ನೋಂದಣಿ ಐಡಿ : KPF-S1-5176

0
Votes
153
Views
1 Year
Since posted

Finished since 495 days, 12 hours and 57 minutes.

Scroll to Top