ಮೂಗುತಿ
ರಚನೆ : ಹುಲಿಸ್ವಾಮಿನಂದನರಂಗ
----------------------------------
ನಲುಮೆಯ ಚೆಲುವೆ; ನನ್ನೆದೆಯ ಬೆಳಗಿತು ನಿನ್ನ ನತ್ತಿನ ಪ್ರತಿಫಲನ. ನನ್ನ ಕಣ್ಣ ಮಿಟುಕಿಸಿತು ಕಿರಿಮುತ್ತು ಹೊಮ್ಮಿಸಿದ ವಿಮುಖ ಕಿರಣಗಳ ಪ್ರಭೆ. ಈ ವಿದ್ಯಾಮಾನಕ್ಕೆ ರವಿ ಮೂಲವೋ? ನಿನ್ನ ಚೆಲುವೋ? ಹೇಳು ಗೆಳತಿ, ಅದಾವ ಮಾಟದ ಮೂಗುತಿ..? ಮೂಗ ತುದಿಯ ತುಸು ಕೆಳಬದಿಗೆ ಜಾರಿದ ನೀರ ಬಿಂದೆ? ಮಿನುಗುತಿಯೆಲ್ಲಾ ನಳನಳಿಸಿ, ಹೊಳೆದು ಪಳಪಳನೆ. ನಿನ್ನ ಮೂಗು ತೊಟ್ಟ ಮೂಗುಬಟ್ಟೆ? ಸಂಪಿಗೆಗೆ ಮುತ್ತಿತ್ತ ದುಂಬಿಯೇ? ಆ ನಿನ್ನ ನತ್ತು. ಹೇಳು ಗೆಳತಿ, ಅದಾವ ಮಾಟದ ಮೂಗುತಿ..?
----------------------------------
ನೋಂದಣಿ ಐಡಿ : KPF-S1-5133