Submission 491

ಅಮರ ಪ್ರೀತಿ

ರಚನೆ : ನಿಖಿಲೇಶ ಕುಂದಗೋಳ

----------------------------------

ಅಧರದಿಂದ ಸ್ಪರ್ಶಿಸಿ ನನ್ನ ಗೀತೆ ಅಮರಗೊಳಿಸು ನನ್ನ ಪ್ರೇಯಸಿಯಾಗು ನನ್ನ ಪ್ರೀತಿ ಅಮರಗೊಳಿಸು ಪ್ರಾಯದ ಹಂಗೇಕೆ ಜನ್ಮಾಂತರದ ಬಂಧವೇಕೆ ಪ್ರೀತಿಸೆ ಹೊರಟವರು ಮನಸೋತರಷ್ಟೇ ಸಾಕೇ ಈ ನೀತಿ ಅನುಸರಿಸು ಈ ರೀತಿ ಅಮರಗೊಳಿಸು ಕಡಲಾಳದ ನಿಶ್ಯಬ್ದ ನನ್ನ ಮನದಲಿ ತುಂಬಿ ಬರಬಾರದೆ ಮತ್ಯ್ಸದ ತರಹ ನಾ ಕಾದಿಹೆ ನಿನ್ನೆ ನಂಬಿ ಬಿದಿರು ಕಾನನದಂತಾಗಿದೆ ನನ್ನೀ ಜೀವನ ನಿನ್ನುಸಿರ ಕೊಳಲನೂದಿ ಸಂಗೀತ ಅಮರಗೊಳಿಸು ಬಾನಂಚಲಿ ಕಾಮನಬಿಲ್ಲು ತೆಲೆ ಬಾಗಿದಹಾಗೆ ಪಾರಿಜಾತ ಭೂ ಸ್ಪರ್ಶಿಸಿ ಹೂ ಹಾಸಿನ ಹಾಗೆ ನಿನ್ನ ಮನಸೋತು ನನ್ನ ಗೆಲುವು ಅಮರಗೊಳಿಸು ನನ್ನ ಪ್ರೇಯಸಿಯಾಗು ನನ್ನ ಪ್ರೀತಿ ಅಮರಗೊಳಿಸು

----------------------------------

ನೋಂದಣಿ ಐಡಿ : KPF-S1-5058

0
Votes
153
Views
1 Year
Since posted

Finished since 435 days, 21 hours and 5 minutes.

Scroll to Top