Submission 469

ಆಂತರ್ಯ

ರಚನೆ : ಸಂಜೀವ್ ಪಿ

----------------------------------

ಅನುಸರಿಸುತ ಬಾಳುವುದರ ಸವಿಯ ಕಂಡ್ಯಾ ಓ ಮನುಜ, ಕಾಣದಿದ್ದರೆ ಒಮ್ಮೆ ಸವಿದು ನೋಡೋ ಓ ಮನುಜ, ಸವಿಕಾರ್ಯ ಸಿಹಿಕಾರ್ಯ ಬಿಡು ಅಂತರಾಳದ ಕ್ರೌರ್ಯ, ಮಂಕುತಿಮ್ಮನ ಸವಿಯನೊಮ್ಮೆ ಸವಿಯೋ ಓ ಮನುಜ. ನಾವಿಕನು ನೀನು ಮಾಲಿಕನು ಅವನು, ಹರಸಿಹನು ನದಿಯನ್ನು ತೇಲಿಸಿಹ ಎಮ್ಮನ್ನು, ಮುಳುಗಿಸಿ ಈಜಿಸುವನೋ ತೇಲಿಸಿ ತಿಮಿಂಗಲ ಹಿಡಿಸುವನೋ, ನಡೆಸಿದಂತೆ ದೋಣಿಯನ್ನು ತಿರುಗಿಸೋ ನೀ ಓ ಮನುಜ. ಅಲ್ಪಜ್ಞಾನಿ ಪೇಳುತಿಹೆನು ಅಲ್ಪಮಾತ್ರ ತಿಳಿದಿಹೆನು, ಅನುಭವಿಸಿದ ಅನುಭವಗಳ ಸಾರವ ಪೇಳುತಲಿಹೆನು, ನೀನು ನಿನ್ನೊಳಗೆ ಮಾತ್ರ ಖೈದಿಯೆಂಬುದನರಿಯೋ, ನಾನು ನೀನಿನಾಟದಲ್ಲಿ ಕಾರ್ಯವ ನೀ ಮರೆಯದಿರೋ.

----------------------------------

ನೋಂದಣಿ ಐಡಿ : KPF-S1-5040

0
Votes
120
Views
1 Year
Since posted

Finished since 313 days, 8 hours and 5 minutes.

Scroll to Top