Submission 457

ಮಳೆಯ ಅಬ್ಬರ

ರಚನೆ : ಮನು ಜಿ

----------------------------------

ಮಳೆಯೇ ಮಳೆಯೇ ಸಾಕು ನಿಲ್ಲಿಸು ನಿನ್ನ ಆಟವನ್ನು , ನಿನ್ನ ಈ ಆಟದಿಂದ ಸೋರುತಿಹುದು ಬಡವರ ಮನೆಯ ಮಾಳಿಗೆ , ನಿನ್ನ ಈ ಆಟದಿಂದ ಶ್ರೀಮಂತರು ಮಾಡುತಿಹರು ಪ್ರಯಾಣ ಪ್ರವಾಸದೆಡೆಗೆ, ಸರಿಯಾದ ಸಮಯಕ್ಕೆ ಬರದೆ ಕಾರಣ ಆಗುವೆ ರೈತರ ಕಣ್ಣೀರಿಗೆ , ಒಮ್ಮೊಮ್ಮೆ ಮೌನವಾಗಿ ಪ್ರಯಾಣ ಮಾಡುವೆ ಬರಗಾಲದೆಡೆಗೆ , ಭೇದ ಭಾವ ಮಾಡದೆ ಇರು ಚಿರ ಋಣಿಯಾಗಿರುತ್ತೇವೆ ನಿನ್ನ ಪ್ರೀತಿಗೆ , ಮಳೆಯೇ ಮಳೆಯೇ ಸಾಕು ನಿಲ್ಲಿಸು ನಿನ್ನ ಆಟವನ್ನು.

----------------------------------

ನೋಂದಣಿ ಐಡಿ : KPF-S1-5033

0
Votes
74
Views
8 Months
Since posted

Finished since 189 days, 22 hours and 11 minutes.

Scroll to Top