ಆ ಸುಂದರಿ
ರಚನೆ : ದೊಡ್ಡಬಸವ ಮ ಹಡಪದ
----------------------------------
ಕೈ ಹಿಡಿದಾರ ಹಿಡಿದು ಬಿಡ ಬಿಟ್ಟಾರ ಬಿಟ್ಟಬಿಡ ಸ್ಮೃತಿಯಾಗಿ ಕಾಡಬ್ಯಾಡ ನೋಡಿ ನಿನ್ನ ಮಾರಿ ಮನಸ್ಸು ಹೋತ ಜಾರಿ ನಾಚಿಕೆಯ ನಾರಿ ಮನಸ್ಸು ಕದ್ದ ಚೋರಿ ನಿಂತೆನಾ ಬೆದರಿ ಬಿಟ್ಟೆನಾ ಸದರಿ ನೋಡಲು ನಿನ್ನ ಮಾರಿ ಅದು ಜರೂರಿ ನಿನ್ನ ನೋಡುವುದು ಅಪಾಯಕಾರಿ ಆದರೂ ನೋಡಬೇಕು ಬಾರಿ ಬಾರಿ ನೀ ಎಷ್ಟು ಪರಿಣಾಮಕಾರಿ ಏ ಪೋರಿ ನೋಡಬ್ಯಾಡ ಕೊರಳ ಮಾಡಿ ವಾರಿ ಕಿರುನಗೆಯ ಬೀರಿ ಇದು ಎಷ್ಟು ಸರಿ ನನಗಂತೂ ಖಾತ್ರಿ ನನ್ನ ಜೇಬಿಗೆ ಕತ್ರಿ ಹುಡುಕಬೇಕು ನಾ ಉದ್ಯೋಗ ಖಾತ್ರಿ ಕಾಡಬ್ಯಾಡ ನೀ ಈ ಪರಿ ನಾ ಬರಬೇಕು ನಿನ್ನ ಹಿಂದ ಹೊಲ ಮನಿ ಮಾರಿ
----------------------------------
ನೋಂದಣಿ ಐಡಿ : KPF-S1-5514