Submission 671

ಅ - ನಾಥ

ರಚನೆ : ಸಾಗರ್ ಸುಂಕದ್

----------------------------------

ಯಾರೋ ನೀನು ಎಂಬ ಪ್ರಶ್ನೆಯೇ ಪ್ರಶ್ನೆ ನನಗೆ ಉತ್ತರ ಗೊತ್ತಿರಬಹುದೆ ಈ ಅ-ನಾಥನಿಗೆ ಕೇಳುವವರಿಲ್ಲ ಹೇಳುವವರಿಲ್ಲ ನನ್ನ ಹಡೆದವರು ಯಾರೆಂದು ನನಗರಿವಿಲ್ಲ ಇಲ್ಲಿ ಬೆಳಕು ಕಾಣುವೆ ಇನ್ನೆಲ್ಲೋ ಕತ್ತಲೆಯನು ಹೀಗೆ ಎಲ್ಲವನ್ನೂ ನೋಡುವೇನು ಎಲ್ಲಿಯೂ ಇರಲಾರೇನು ಹೇಗೋ ಹೊರಟಿರುವೆ ಹೆದರುತ್ತ ಬಾಳೆಂಬ ಈ ಭಯಂಕರ ಸದ್ದಿಗೆ ನನ್ನ ಅನಾಥ ಪ್ರಜ್ಞೆಯ ಕೂಗೇ ಲಾಲಿ ನನ್ನ ನಿದ್ದೆಗೆ ಕಂಕಳಲ್ಲಿ ಎತ್ತಿಕೊಳ್ಳುವರು ಎಷ್ಟೋ ಜನ ಶಾಶ್ವತ ಮಡಿಲೆಂಬ ಸ್ಥಾನ ಗುರುತಿಸಲಾಗಿದೆ ನನ್ನ ಮನ ಯಾರೂ ಇಲ್ಲದಿದ್ದರೂ ನನಗೆಲ್ಲರು ಗೊತ್ತು ನನ್ನ ಅರಿತುಕೊಳ್ಳಲು ಎಲ್ಲರಿಗೂ ಆಯಿತು ಹೊತ್ತು ಪರಿವಾರವೆಂಬುದು ಮರಿಚಿಕೆ ನನ್ನ ಪ್ರಾಣಕೆ ಭೂ ತಾಯಿಯ ಮಡಿಲೇ ಹಾಸಿಗೆ ನನ್ನ ಮರಣಕೆ

----------------------------------

ನೋಂದಣಿ ಐಡಿ : KPF-S1-5285

0
Votes
156
Views
1 Year
Since posted

Finished since 479 days, 7 hours and 56 minutes.

Scroll to Top